ಮುಳ್ಳೂರು ಸರಕಾರಿ ಶಾಲೆ: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ಸಹ ಶಿಕ್ಷಕ ಸಿ.ಎಸ್. ಸತೀಶ್ ಮುಂದಾಳತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸರಕಾರದ ಆದೇಶದ ಅನ್ವಯ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಿರಲಿಲ್ಲ. ಶಿಕ್ಷಕರೇ ಆಚರಿಸುವಂತೆ ಆದೇಶವಿದ್ದ ಕಾರಣ ಶಿಕ್ಷಕ ಸತೀಶ್ ಕೊಠಡಿಯನ್ನು ಕನ್ನಡ ಧ್ವಜಗಳಿಂದ ಹಾಗೂ ಸಾಹಿತಿಗಳ ಭಾವಚಿತ್ರದಿಂದ ಅಲಂಕರಿಸಿದರು. ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಆಚರಿಸಿದರು.ಕ್ರೆಸೆಂಟ್ ಶಾಲೆ: ನಗರದ ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಿಕ್ಷಕರಿಗಾಗಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಪ್ರಾಂಶುಪಾಲರಾದ ಜೋಯಿಸಿ ವಿನಯ, ಶಿಕ್ಷಕರಾದ ನಾಗಶೆಟ್ಟಿ, ಸುಲ್‍ಹತ್ ಮತ್ತು ಸುಜ್ಯೋತಿ ಉಪಸ್ಥಿತರಿದ್ದರು.