ಗೋಣಿಕೊಪ್ಪಲು, ನ.4: ಮುಂಜಾನೆ ತಮ್ಮ ಕಾಫಿ ತೋಟಕ್ಕೆ ತೆರಳಿದ ವೇಳೆ ಏಕಾಏಕಿ ಒಂಟಿ ಸಲಗವು ದಾಳಿ ಮಾಡಿದ್ದು, ಪರಿಸರ ವಾದಿ ಕರ್ನಲ್ ಚೆಪ್ಪುಡಿರ ಪೂಣಚ್ಚ ಅವರ ಬಲಗಾಲು ಮುರಿತ ಗೊಂಡಿದೆ. ಗೋಣಿಕೊಪ್ಪ ಸಮೀಪದ ಅತ್ತೂರುವಿನಲ್ಲಿ ಘಟನೆ ಸಂಭವಿಸಿದ್ದು, ಕಾಲು ಮುರಿತಗೊಳಗಾದ ಪರಿಸರ ವಾದಿ, ಕೊಡಗು ವೈಲ್ಡ್‍ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷÀ ಕರ್ನಲ್ ಚೆಪ್ಪುಡೀರ ಮುತ್ತಣ್ಣ. ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಬುಧವಾರ ಮುಂಜಾನೆ 8 ಗಂಟೆ ಸುಮಾರಿಗೆ ಎಂದಿನಂತೆ ಮುತ್ತಣ್ಣನವರು ತಮ್ಮ ಕಾಫಿ ತೋಟಕ್ಕೆ ತೆರಳಿದ್ದರು. ಈ ಸಂದರ್ಭ ಕಾಫಿ ತೋಟದಲ್ಲಿ ಅಡಗಿ ನಿಂತಿದ್ದ ಒಂಟಿ ಸಲಗವು ಇವರನ್ನು ಕಂಡು ಘೀಳಿಡುತ್ತಾ ಇವರ ಬಳಿ ಓಡಿ ಬಂದಿದೆ. ಆನೆ ಕಂಡ ಮುತ್ತಣ್ಣನವರು ಇದರಿಂದ ತಪ್ಪಿಸಿಕೊಳ್ಳಲು ಕಾಫಿ ತೋಟದಲ್ಲಿದ್ದ ಸಣ್ಣದಾದ ಗುಂಡಿ ಯಲ್ಲಿ ಅವಿತುಕೊಳ್ಳುವ ಪ್ರಯತ್ನ ಮಾಡಿ ದ್ದಾರೆ. ಈ ಸಂದರ್ಭ ಕಾಡಾನೆಯು ಇವರ ಬಲಗಾಲನ್ನು ಮೆಟ್ಟಿ ಮುಂದಕ್ಕೆ ಸಾಗಿದೆ. ಅದೃಷ್ಟವಶಾತ್ ಇವರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ನಂತರ ಇವರನ್ನು ಗೋಣಿಕೊಪ್ಪಲುವಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಡಾ. ಬಿಷನ್ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಭಾರೀ ಗಾತ್ರದ ಒಂಟಿ ಸಲಗವು ರಭಸದಿಂದ ಬಂದು ಕಾಲನ್ನು ಮೆಟ್ಟಿ ಮುಂದೆ ಸಾಗಿ ಹೋಗಿದ್ದರಿಂದ ಕಾಡಾನೆ ಕಾಲಿಗೆ ಮೆಟ್ಟಿದ ಅನುಭವವಾಗಲಿಲ್ಲ. ಮುಂದಾ ಗಬಹುದಾಗಿದ್ದ

(ಮೊದಲ ಪುಟದಿಂದ) ದೊಡ್ಡ ಅನಾಹುತವು ತಪ್ಪಿದಂತಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಕರ್ನಲ್ ಮುತ್ತಣ್ಣನವರ ಯೋಗಕ್ಷೇಮ ವಿಚಾರಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಆಸ್ಪತ್ರೆಗೆ ಬರಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಖುದ್ದಾಗಿ ಕರೆದೊಯ್ಯುವಂತೆ ತಿತಿಮತಿ ಅರಣ್ಯ ಇಲಾಖೆಯ ಆರ್‍ಎಫ್‍ಒ ಅಶೋಕ್ ಹುನಗುಂದ,ಪೊನ್ನಂಪೇಟೆ ಆರ್‍ಎಫ್‍ಒ ರಾಜಪ್ಪರೊಂದಿಗೆ ಚರ್ಚಿಸಿದರು. ಅಲ್ಲದೆ ಇಲಾಖೆ ವತಿಯಿಂದ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಚರ್ಚಿಸಲಾಯಿತು.

ಸ್ಥಳದಿಂದ ಮೈಸೂರು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಾದ ಹೀರಲಾಲ್‍ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮನುಸೋಮಯ್ಯ ಇಲ್ಲಿಯ ಘಟನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಈ ಭಾಗದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಒಂಟಿ ಸಲಗವನ್ನು ಕೂಡಲೇ ಹಿಡಿದು ಸಾರ್ವಜನಿಕರಿಗೆ ಮುಂದಾಗಬಹುದಾದ ಪ್ರಾಣಾಪಾಯ ವನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಇವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಸಿಎಫ್ ಹೀರಾಲಾಲ್ ಕೂಡಲೇ ಕಾಡಾನೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

ಅತ್ತೂರು, ಕೊಳತ್ತೋಡು, ಬೈಗೋಡು, ಈ ಭಾಗದಲ್ಲಿ ಈ ಒಂಟಿ ಸಲಗವು ಅನೇಕ ಸಮಯದಿಂದ ರೈತರ ಕಾಫಿ ತೋಟದಲ್ಲಿ ನೆಲೆಸಿದ್ದು ಆಗಿಂದಾಗ್ಗೆ ತೋಟಗಳಲ್ಲಿ ಈ ಆನೆಯು ಕಾರ್ಮಿಕರಿಗೆ, ಸಾರ್ವಜನಿಕರಿಗೆ, ಭಯಪಡಿಸುತ್ತಿದೆ. ಅನೇಕ ಬಾರಿ ಈ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಒತ್ತಾಯ ಮಾಡಿದರೂ ಪ್ರಯೋಜನ ವಾಗಿಲ್ಲ. ಈ ಭಾಗದಲ್ಲಿ ಕಾಫಿ ತೋಟದಲ್ಲಿ ಕರ್ತವ್ಯ ನಿರ್ವಹಿಸಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಸದಾ ಭಯದ ವಾತಾ ವರಣದಲ್ಲಿಯೇ ಕೆಲಸ ನಿರ್ವಹಿಸುವ ಅನಿವಾರ್ಯತೆ ಇಲ್ಲಿಯ ಕಾರ್ಮಿಕರ ದ್ದಾಗಿದೆ. -ಹೆಚ್.ಕೆ.ಜಗದೀಶ್