ನಾಪೆÉÇೀಕ್ಲು, ನ. 3: ನಾಪೆÉÇೀಕ್ಲು – ಮೂರ್ನಾಡು ಸಂಪರ್ಕ ಕಲ್ಪಿಸುವ ಹೊದ್ದೂರು ಮಾರಿಕಾಂಬ ದೇವಳದ ಕತ್ತಲೆ ಓಣಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾವಾಗುತ್ತಿದ್ದು ಕಾಮಗಾರಿಯು ಬಿರುಸಿನಿಂದ ನಡೆಯುತ್ತಿದೆ. ರಸ್ತೆ ಕಾಮಗಾರಿಗಾಗಿ ಒಂದು ತಿಂಗಳ ಕಾಲ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸ ಲಾಗಿದ್ದು, ಇದೀಗ ಕಾಮಗಾರಿಯು ಮುಗಿಯುವ ಹಂತದಲ್ಲಿ ಒಂದು ವಾರದ ನಂತರ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಲೊಕೋಪಯೋಗಿ ಇಂಜಿನಿಯರ್ ಸತೀಶ್ ತಿಳಿಸಿದ್ದಾರೆ.