ವೀರಾಜಪೇಟೆ, ವರದಿ. ನ. 3: ಇಲ್ಲಿನ ನಂ.304 ನೇ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದ ಎಲ್ಲಾ 15 ಸ್ಥಾನಗಳಿಗೆ ಅವಿರೋಧ ಆಯ್ಕೆ ಯಾಗಿದೆ ಎಂದು ಚುನಾವಣಾಧಿಕಾರಿ ಪಿ.ಬಿ. ಮೋಹನ್ ಕುಮಾರ್ ತಿಳಿಸಿದ್ದಾರೆ.
ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅ. 31 ಕೊನೆಯ ದಿನವಾಗಿತ್ತು. 15 ಮಂದಿ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದರು. ನ. 1 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ಆದರೆ ಯಾವುದೇ ಆಕಾಂಕ್ಷಿಗಳು ನಾಮಪತ್ರ ಹಿಂತೆಗೆದು ಕೊಳ್ಳದೆ ಕಣದಲ್ಲಿ ಉಳಿದರು. ತಾ. 7 ರಂದು ಚುನಾವಣೆ ನಡೆಯಲಿದ್ದು, ಹದಿನೈದು ಅಭ್ಯರ್ಥಿಗಳು ಇರುವುದರಿಂದ ಮುಂದಿನ 2020-2025 ಐದು ವರ್ಷದ ಅವಧಿಗೆ ಎಲ್ಲಾ ಹದಿನೈದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪನಿಯಮ ಸಂಖ್ಯೆ 4ರ ಅನ್ವಯ ‘ಎ’ ತರಗತಿಯಲ್ಲಿ ಎಂ.ಪಿ. ಪೂಣಚ್ಚ, ಕೆ.ಕೆ. ಮಂದಣ್ಣ, ವೀರಾಜಪೇಟೆ ತಾಲೂಕು ಸಾಮಾನ್ಯ ವಿಭಾಗದಲ್ಲಿ ಕೊಲ್ಲೀರ ಗೋಪಿ ಚಿಣ್ಣಪ್ಪ, ಬಿ.ಎಂ. ದೇವಯ್ಯ, ಕೋಡಿರ ಎಂ. ಚಂಗಪ್ಪ, ಚೆರಿಯಪಂಡ ಎಂ. ರಾಜ ನಂಜಪ್ಪ, ಮಡಿಕೇರಿ ತಾಲೂಕು ಕಾದಿರ ಯು. ಉಮೇಶ್ ಪಳಂಗಪ್ಪ, ಚೇನಂಡ ಎಂ. ಸುರೇಶ್ ನಾಣಯ್ಯ, ಕಾಟುಮಣಿಯಂಡ ಎಂ. ಉಮೇಶ್, ಹಿಂದುಳಿದ ವರ್ಗ (ಪ್ರವರ್ಗ ‘ಎ’) ಮೀಸಲು ಸ್ಥಾನದಲ್ಲಿ ಕೆ.ಬಿ. ವಿಜಯನ್ (ವಿ.ತಾ) ಬಾಚಮಂಡ ಕೆ. ಸುಬ್ರಮಣಿ (ಮ.ತಾ) ಪರಿಶಿಷ್ಟ ಜಾತಿ ಹೆಚ್.ಪಿ. ಉದಯ (ವಿ.ತಾ) ಕುಡಿಯರ ಎ. ತಮ್ಮಯ್ಯ (ಮ.ತಾ) ಮಹಿಳಾಮೀಸಲು ಸ್ಥಾನ ಅಮ್ಮೆಕಂಡ ಸಿ.ದಮಯಂತಿ (ವಿ.ತಾ) ಅಪ್ಪಚ್ಚಿರ ಎಂ. ನೀಲಮ್ಮ (ಮ.ತಾ) ಅವರುಗಳು ಆಯ್ಕೆಯಾಗಿದ್ದಾರೆ.
-ಪ್ರವೀಣ್ ಚಂಗಪ್ಪ