ಕುಶಾಲನಗರ, ನ. 2: ಕುಶಾಲನಗರ ಸಂತ ಸೆಬಾಸ್ಟಿಯನ್ ಶಾಂತಿಧಾಮದಲ್ಲಿ ಗೋರಿಪೂಜೆ ವಿಶೇಷ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ತಾ. 2 ರಂದು ಈ ಕಾರ್ಯಕ್ರಮವನ್ನು ಅಗಲಿದ ಬಂಧುಗಳ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪೂಜೆ ಸಲ್ಲಿಸಿದರು.
ಸ್ಮಶಾನ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಗೋರಿಗೆ ಹೂವು ಅಲಂಕಾರದೊಂದಿಗೆ ಕ್ಯಾಂಡಲ್ ಉರಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಚರ್ಚ್ ಧರ್ಮಗುರುಗಳು ಆಗಮಿಸಿ ಪೂಜೆ ಸಲ್ಲಿಸಿದರು.