ಮಡಿಕೇರಿ, ನ. 2: ತಾ. 26 ರಂದು ಸಂವಿಧಾನ ಅಂಗೀಕಾರವಾದ ದಿನದ ಪ್ರಯುಕ್ತ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ ಕೊಡಗು ಇವರ ವತಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ಯಾವುದೇ ಕುಟುಂಬ ವರ್ಗ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ‘ಒಂದು ಕುಟುಂಬ -ಒಂದು ಪ್ರಬಂಧ’ ಪರಿಕಲ್ಪನೆಯಡಿ ‘ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರ ಪಾತ್ರ’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.

ಪ್ರಬಂಧವು ಸಾವಿರ ಪದಗಳನ್ನು ಮೀರಿರಬಾರದು. ಎ4 ಸೈಜಿನ ಬಿಳಿ ಹಾಳೆಯ ಒಂದೇ ಬದಿಯಲ್ಲಿ ಬರೆದು ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ, ಅ/o ಸಹನ ಎಂಟರ್‍ಪ್ರೈಸಸ್, ಕಾರ್ಮಾಡು ಗ್ರಾಮ,ಅಮ್ಮತ್ತಿ ಅಂಚೆ-571211, ವೀರಾಜಪೇಟೆ ತಾಲೂಕು, ಕೊಡಗು ಜಿಲ್ಲೆ. ಈ ವಿಳಾಸಕ್ಕೆ ತಾ. 20ರೊಳಗಾಗಿ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9483834971 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.