ಮಡಿಕೇರಿ, ನ. 2: ಮಡಿಕೇರಿ ನಗರ ವ್ಯಾಪ್ತಿಯ ಕಸವನ್ನು ಸ್ಟೋನ್ಹಿಲ್ ಬಳಿ ಬೆಟ್ಟ ಸಾಲಿನಲ್ಲಿ ಸುರಿಯುತ್ತಿರುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ದೂರಿನ ಸಂಬಂಧ ತಾ. ರಂದು ವಿಚಾರಣೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪೌರಾಡಳಿತ ಸಚಿವಾಲಯ ಮಡಿಕೇರಿ, ನ. 2: ಮಡಿಕೇರಿ ನಗರ ವ್ಯಾಪ್ತಿಯ ಕಸವನ್ನು ಸ್ಟೋನ್ಹಿಲ್ ಬಳಿ ಬೆಟ್ಟ ಸಾಲಿನಲ್ಲಿ ಸುರಿಯುತ್ತಿರುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ದೂರಿನ ಸಂಬಂಧ ತಾ. 5 ರಂದು ವಿಚಾರಣೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪೌರಾಡಳಿತ ಸಚಿವಾಲಯ ಅಗತ್ಯ ಕ್ರಮ ವಹಿಸುವ ದಿಸೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲಾಗುವದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.ಮಡಿಕೇರಿ ನಗರದ ಸುಬ್ರಹ್ಮಣ್ಯ ನಗರ, ರೈಫಲ್ ರೇಂಜ್, ಕನ್ನಿಕಾ ಬಡಾವಣೆ ಹಾಗೂ ವಿದ್ಯಾನಗರ ನಿವಾಸಿಗಳು ಎಸ್ಆರ್ವಿಕೆ ಸಂಘಟನೆಯಡಿ, ಸ್ಟೋನ್ಹಿಲ್ ಬಳಿ ಸುರಿಯುತ್ತಿರುವ ಬಗ್ಗೆ ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆ ದಿಸೆಯಲ್ಲಿ ಜಿಲ್ಲಾಡಳಿತವು ಮಡಿಕೇರಿ ನಗರಸಭೆ ಹಾಗೂ ಪೌರಾಡಳಿತ ಸಚಿವಾಲಯದ ಗಮನ ಸೆಳೆದು ಸಮಸ್ಯೆಗೆ ಪರಿಹಾರದೊಂದಿಗೆ ವಿಚಾರಣೆ ಹಂತದಲ್ಲಿರುವ ನ್ಯಾಯಾಲಯಕ್ಕೆ ಪ್ರಕರಣ ಸಂಬಂಧ ವರದಿ ಸಲ್ಲಿಸಲು ನಿರ್ಧರಿಸಿದೆ.
ಹೀಗಾಗಿ ಪೌರಾಡಳಿತ ಸಚಿವಾಲಯದ ಇಂಜಿನಿಯರ್ ಭಾನುಮತಿ ಹಾಗೂ ಕಸ ನಿರ್ವಹಣಾ ಘಟಕದ ಖಾಸಗಿ ಸಂಸ್ಥೆಯ ತಜ್ಞರು ಖುದ್ದು ಸ್ಥಳ ಪರಿಶೀಲನೆ ನಡೆಸಿದರು. ತಜ್ಞರ ಅಭಿಪ್ರಾಯ ಕ್ರೋಢೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಗರಸಭೆ ಆಯುಕ್ತ ರಾಮದಾಸ್ ಹಾಗೂ ಇತರರೊಂದಿಗೆ ಸಮಸ್ಯೆ ಇತ್ಯರ್ಥಕ್ಕೆ ಚರ್ಚಿಸಿದರು.
ನ್ಯಾಯಾಲಯಕ್ಕೆ ಪ್ರಮಾಣ ಪತ್ರ : ಮಡಿಕೇರಿಯ ನಗರವ್ಯಾಪ್ತಿ ಕಸ ನಿರ್ವಹಣೆ ಸಂಬಂಧ ತಜ್ಞರ ಅಭಿಪ್ರಾಯದಂತೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸುವದಾಗಿಯೂ ಜಿಲ್ಲಾಧಿಕಾರಿಗಳು ‘ಶಕ್ತಿ’ಯೊಂದಿಗೆ ನುಡಿದರು.
ಜನತೆ ಸಹಕರಿಸಬೇಕು : ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತ ರಾಮದಾಸ್ ಅವರು, ತಜ್ಞರ ವರದಿ ಆಧರಿಸಿ ಉಚ್ಚ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲಾಗುವದು; ಮುಂದೆ ನ್ಯಾಯಾಲಯದ ನಿರ್ದೇಶನ ಗಮನಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಅಭಿಪ್ರಾಯಪಟ್ಟರು. ಜನತೆ ಈ ಕುರಿತು ಸಹಕರಿಸಬೇಕೆಂದು ಅವರು ವಿನಂತಿಸಿದರು.
- ಟಿ.ಜಿ. ಸತೀಶ್