‘ಶಕ್ತಿ’ ವರದಿಗೆ ಸ್ಪಂದನ

ಕೂಡಿಗೆ, ನ. 2: ತಾ.29 ರಂದು ಪ್ರಕಟಗೊಂಡಿರುವ ‘‘ಅನಾಥವಾಗಿರುವ ಕೂಡಿಗೆ ಗ್ರಾಮ ಪಂಚಾಯತಿ’’ ವರದಿಗೆ ತಾಲೂಕು ಪಂಚಾಯಿತಿ ಅಧಿಕಾರಿ ಸ್ಪಂದಿಸಿದರು. ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿ ಇಲ್ಲದಿರುವುದಾಗಿ ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗಿತ್ತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಕೂಡಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಭಿವೃದ್ಧಿ ಅಧಿಕಾರಿಯ ನೇಮಕ ಮಾಡುವ ಭರವಸೆಯನ್ನು ನೀಡಿದರು. ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇಮಕ ಅಥವಾ ವರ್ಗಾವಣೆ ಮಾಡುವುದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಅಧಿಕಾರವಾಗಿದೆ. ಈಗಾಗಲೇ ಮೇಲ್ಮಟ್ಟದ ಅಧಿಕಾರಿ ಅವರ ಗಮನಕ್ಕೆ ತರಲಾಗಿದ್ದು, ಒಂದು ವಾರದ ಒಳಗೆ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡಿ ನಂತರ ಗ್ರಾಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.