ಕೂಡಿಗೆ, ನ. 1: ಅ. 29 ರಂದು ಪ್ರಕಟವಾದ ‘‘ಪರಿಹಾರಕ್ಕಾಗಿ ಕಾಯುತ್ತಿರುವ ನದಿ ದಂಡೆಯ ನಿವಾಸಿಗಳು, ಭರವಸೆ ನೀಡಿದರೂ ಬಾರದ ಪರಿಹಾರ’’ ಶೀರ್ಷಿಕೆ ಅಡಿಯ ವರದಿಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ಆದೇಶಗಳಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 8- 4 2020 ರಂತೆ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಲ್ಲಿನ ಬಟ್ಟೆ ಬರೆ, ದಿನಬಳಕೆ ವಸ್ತುಗಳು, ಪಾತ್ರೆಗಳು ಇತ್ಯಾದಿ ಗೃಹೋಪಯೋಗಿ ವಸ್ತುಗಳು ಹಾನಿಯಾದಲ್ಲಿ ಪ್ರತಿ ಕುಟುಂಬಕ್ಕೆ ರೂ. 3,800 ಪರಿಹಾರ ನೀಡಲು ಆದೇಶಿಸಿರುವುದಾಗಿದೆ.
ರಾಜ್ಯ ಸರ್ಕಾರದ ಆದೇಶ ಟಿಎನ್‍ಆರ್ 2020ರಂತೆ ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾದಲ್ಲಿ 6,200 ಪರಿಹಾರವನ್ನು ನೀಡಲು ಆದೇಶಿಸಿರುವುದಾಗಿದೆ.
ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನಾ ಸಂಪ್ರವಿ46ರ ಪ್ರಕಾರ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಲ್ಲಿನ ಗೃಹೋಪಯೋಗಿ ವಸ್ತು ಹಾನಿಯಾದಲ್ಲಿ ಮೇಲ್ಕಂಡ ಎರಡು ಸರ್ಕಾರಿ ಆದೇಶದಂತೆ ಒಟ್ಟು 10,000 ಪರಿಹಾರ ನೀಡಲು ಆದೇಶಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ, ನೋಡಲ್ ಅಧಿಕಾರಿ ಹಾಗೂ ಕಂದಾಯ ಪರಿವೀಕ್ಷಕ ವಿಕ್ಷಣೆ ಮಾಡಿದ್ದಾರೆ. ಕುಶಾಲನಗರ ಮನೆಗಳಿಗೆ ನೀರು ನುಗ್ಗಿರುತ್ತದೆ ಯಾವುದೇ ಬಟ್ಟೆ, ಗೃಹಬಳಕೆ ವಸ್ತುಗಳು ಪರಿಶೀಲನೆಯಲ್ಲಿ ಕಂಡು ಬಂದಿರುವುದಿಲ್ಲ ಎಂಬದಾಗಿ ವರದಿಯನ್ನು ಸಲ್ಲಿಸಿದ್ದೇವೆ ಎಂದು ತಾಲೂಕು ತಹಶೀಲ್ದಾರ್ ಲಿಖಿತವಾಗಿ ಸ್ಪಷ್ಟನೆ ನೀಡಿದ್ದಾರೆ.