ವೀರಾಜಪೇಟೆ, ನ. 1: ವೀರಾಜಪೇಟೆ ಪಟ್ಟಣ ಬಳಿಯ ಒತ್ತಾಗಿರುವ ಕಲ್ಲುಬಾಣೆಯ ಕೂಲಿ ಕಾರ್ಮಿಕ ಎ.ಎಸ್. ಶಿವು (40) ಎಂಬಾತ ಎರಡು ದಿನಗಳಿಂದ ನಾಪತ್ತೆಯಾಗಿದ್ದು ಆತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಲ್ಲುಬಾಣೆಯ ಖಾಸಗಿ ಜಾಗದ ಮರದಲ್ಲಿ ಪತ್ತೆಯಾಗಿದೆ.

ಕೊರೊನಾ ವೈರಸ್‍ನ ಪರಿಣಾಮ ವಾಗಿ ಕೆಲಸವಿಲ್ಲದೆ ಅಲೆದಾಡುತ್ತಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿ ಕೊಂಡಿರಬಹುದೆಂದೂ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಆತನ ಪತ್ನಿ ಗೀತಾ ನಗರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಮೃತದೇಹವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ವಾರೀಸುದಾರರ ವಶಕ್ಕೆ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.