ಮಡಿಕೇರಿ, ಅ. 31: ಜಿಲ್ಲೆಯಲ್ಲಿ ತಾ. 31 ರಂದು ಹೊಸದಾಗಿ 26 ಕೊರೊನಾ ಪ್ರಕರಣಗಳು ವರದಿ ಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 69,788 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,892 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 4,654 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು 68 ಮಂದಿ ಸಾವನ್ನಪ್ಪಿದ್ದು 170 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 43 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 30 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 97 ಮಂದಿ ಹೋಮ್ ಐಸೋಲ್ಸೇನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 182 ನಿಯಂತ್ರಿತ ವಲಯಗಳಿವೆ.