ವೀರಾಜಪೇಟೆ, ಅ.31: ವೀರಾಜಪೇಟೆಯ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ಇಂದು ಕೂಲಿ ಕಾರ್ಮಿಕನ ಮೃತದೇಹ ಪತ್ತೆಯಾ ಗಿದ್ದು, ಇಲ್ಲಿನ ನಗರ ಪೊಲೀಸರು ಆತನ ಜೇಬಿನೊಳಗಿದ್ದ ಮೊಬೈಲ್‍ನ್ನು ಪರಿಶೀಲಿಸಿದಾಗ ಈತ ಪಿರಿಯಾ ಪಟ್ಟಣ ತಾಲೂಕಿನ ಕೊಣಸೂರು ಗ್ರಾಮದ ನಿವಾಸಿ ಮಂಜುನಾಥ್ (40) ಎಂದು ಗೊತ್ತಾಗಿದೆ.

ಮೃತ ಮಂಜುನಾಥ್ ಕೆಲವು ತಿಂಗಳ ಹಿಂದೆ ವೀರಾಜಪೇಟೆಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದನು. ಇಂದು ಇಲ್ಲಿನ ಬಸ್ ನಿಲ್ದಾಣದಲ್ಲಿ ಕುರ್ಚಿಯಲ್ಲಿ ಕುಳಿತಿದ್ದಾಗ ಹೃದಯಾ ಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ಶಂಕಿಸಿದ್ದು, ಮೊಬೈಲ್ ನಲ್ಲಿ ದೊರೆತ ಮಾಹಿತಿ ಮೇರೆಗೆ ಕೊಣಸಾಪುರದಲ್ಲಿರುವ ಆತನ ತಂದೆಗೆ ವಿಷಯ ತಿಳಿಸಲಾಯಿತು.

ನಗರ ಪೊಲೀಸರಿಗೆ ದೂರು ದೊರೆತ ಮೇರೆಗೆ ಪೊಲೀಸರು ಆಕಸ್ಮಿಕ ಸಾವಿನ ಕುರಿತು ಪ್ರಕರಣ ದಾಖಲಿಸಿದ್ದು, ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಸಂಜೆ ವಾರಸುದಾರರಿಗೆ ಒಪ್ಪಿಸಿದ್ದಾರೆ.