ಗೋಣಿಕೊಪ್ಪಲು, ಅ.31: 2021-22ನೇ ಸಾಲಿನ ರೈತರ ಕ್ರಿಯಾ ಯೋಜನೆ ತಯಾರಿಕೆ ಕುರಿತು ಬಲ್ಯಮುಂಡೂರು ಗ್ರಾಮ ಪಂಚಾಯ್ತಿಯ ವಾರ್ಡ್ ಸಭೆಯು ನ.3ರ ಪೂರ್ವಾಹ್ನ 11 ಗಂಟೆಗೆ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. 12.30ಕ್ಕೆ ತೂಚಮಕೇರಿ ಹಾಗೂ ಚಿಕ್ಕಮುಂಡೂರು ಗ್ರಾಮದ ವಾರ್ಡ್ ಸಭೆಯು ತೂಚಮಕೇರಿ ಸಮುದಾಯ ಭವನದಲ್ಲಿ ನಡೆಯಲಿದೆ. ಅಪರಾಹ್ನ 2.30ಗಂಟೆಗೆ ಮುಗುಟಗೇರಿ ಮತ್ತು ನಡಿಕೇರಿ ಗ್ರಾಮದ ವಾರ್ಡ್ ಸಭೆಯು ಕಲ್ಲುಕೋರೆ ಸಮುದಾಯ ಭವನದಲ್ಲಿ ನಡೆಯಲಿದೆ.