ಮಡಿಕೇರಿ, ಅ. 30: ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಇವರು 14 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಆನ್‍ಲೈನ್ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಮಕ್ಕಳ ಸಾಗಾಣಿಕೆ, ಮಕ್ಕಳ ಭಿಕ್ಷಾಟನೆ ವಿರುದ್ಧ ಮತ್ತು ಜಾಲತಾಣ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕುರಿತಂತೆ ಪ್ರಬಂಧ, ಚಿತ್ರಕಲೆ, ಭಿತ್ತಿಪತ್ರ (ಪೋಸ್ಟರ್ಸ್) ಪದ್ಯಗಳನ್ನು ರಚಿಸಿ ಅವುಗಳ ಸಾಫ್ಟ್ ಪ್ರತಿಗಳನ್ನು ಜಛಿಠಿ.ಛಿhiಟಜಡಿeಟಿಜಚಿಥಿ2020@gmಚಿiಟ.ಛಿom ಇ-ಮೇಲ್ ವಿಳಾಸಕ್ಕೆ ನಿಗದಿತ ಅರ್ಜಿ ನಮೂನೆಯೊಂದಿಗೆ ನವೆಂಬರ್ 4 ರ ಸಂಜೆ 5.30 ರೊಳಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಯನ್ನು iಛಿಠಿs.ಞಚಿಡಿಟಿಚಿಣಚಿಞಚಿ.gov.iಟಿ ಅಂತರ್ಜಾಲ ತಾಣದಲ್ಲಿ ಪಡೆಯಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.