ಸೋಮವಾರಪೇಟೆ, ಅ. 30: ಸಮೀಪದ ಮಾದಾಪುರ ಗ್ರಾ.ಪಂ. ಕಟ್ಟಡಕ್ಕೆ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ತಾ. 23 ರ ರಾತ್ರಿ 12 ಗಂಟೆಗೆ ಗ್ರಾ.ಪಂ. ಕಟ್ಟಡಕ್ಕೆ ಅಳವಡಿಸಿದ್ದ ಎರಡು ಸಿಸಿ ಕ್ಯಾಮರಾಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಶಿರಂಗಳ್ಳಿ ಗ್ರಾಮದ ಡಾಲಿ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆÉ ನ್ಯಾಯಾಧೀಶÀರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಳವು ಮಾಡಿದ್ದ ಸುಮಾರು 5 ಸಾವಿರ ಮೌಲ್ಯದ ಸಿಸಿ ಕ್ಯಾಮರಾಗಳನ್ನು ಆರೋಪಿ ಡಾಲಿ ಮಡಿಕೇರಿಯ ಗುಜರಿ ಅಂಗಡಿವೊಂದಕ್ಕೆ ಕೇವಲ 80 ರೂಪಾಯಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಠಾಣಾಧಿಕಾರಿ ವಿನಯ್‍ಕುಮಾರ್, ಮಾದಾಪುರ ಉಪಠಾಣೆಯ ಎಎಸ್‍ಐ ಪೊನ್ನಪ್ಪ, ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ್, ಮಧು, ಸುರೇಶ್, ಶಿವಕುಮಾರ್ ಅವರುಗಳು ಭಾಗವಹಿಸಿದ್ದರು.