ಶನಿವಾರಸಂತೆ, ಅ. 29: ಸಮೀಪದ ನಂದಿಗುಂದ ಗ್ರಾಮದಲ್ಲಿ ಗೊಂದಳ್ಳಿ, ಶಾಂತ್ವೇರಿ ಹಾಗೂ ನಂದಿಗುಂದ ಗ್ರಾಮಸ್ಥರಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧಾರಿತ ಧಾರಾವಾಹಿಯ ನಾಮಫಲಕ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ. ಆದಿಲ್ ಪಾಶ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತ ನಾಯಕರಲ್ಲ; ಅವರು ದೇಶಕ್ಕೆ ಮಹಾನಾಯಕ. ಅವರ ಸರಳ ಜೀವನ, ವಿಚಾರಧಾರೆ, ಚಿಂತನೆ ಅರಿತು ಸಂಘಟಿತರಾಗಿ, ಅನುಷ್ಠಾನಕ್ಕೆ ತಂದು ಪಾಲಿಸಬೇಕು ಎಂದರು.

ಶಿಕ್ಷಕ ಧರ್ಮಪ್ಪ ಹಾಗೂ ನಿವೃತ್ತ ಸೈನಿಕ ಯತೀಶ್ ಮಾತನಾಡಿದರು.

ಶಾಂತ್ವೇರಿ ವಿನಯ್ ಅಧ್ಯಕ್ಷತೆ ವಹಿಸಿದ್ದರು. ಗೌಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದಪ್ಪ, ವಿನಯ್, ಮುಖಂಡ ಮೊಗಪ್ಪ, ಮಂಜುನಾಥ್, ಕರವೇ ಹೋಬಳಿ ಘಟಕದ ಅಧ್ಯಕ್ಷ ಆನಂದ್, ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ಪ್ರವೀಣ್, ಗ್ರಾಮದ ಜಯಂತ್, ಮಹೇಶ್, ಯತೀಶ್, ಪ್ರಜ್ವಲ್ ಇದ್ದರು.