ಕಣಿವೆ, ಅ. 29 : ಯಡವನಾಡು ಬಳಿಯ ಸೂಳೆಬಾವಿ ಗಿರಿಜನ ಹಾಡಿಯ ವಿಶೇಷ ಚೇತನ ಬಾಲಕಿಯೊಬ್ಬಳು ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ ದಿಂದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿದ್ದಾಳೆ.

ಹಾಡಿಯ ಕೂಲಿ ಕಾರ್ಮಿಕರಾದ ವಿನುಕೃಷ್ಣ ಹಾಗೂ ಅನಿತಾ ಎಂಬವರ ಎಂಟು ವರ್ಷದ ಹರಿಣಿ ಎಂಬ ಬಾಲಕಿ ಹುಟ್ಟುತ್ತಲೇ ಅಂಗವೈಕಲ್ಯತೆ ಹೊಂದಿದ್ದಾಳೆ. ಈ ಬಾಲಕಿಗೆ ಅಂಗವಿಕಲ ಕಲ್ಯಾಣ ಇಲಾಖೆ ಅಥವಾ ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ದೊರಕಬೇಕಾದ ಆಟಿಕೆಯಾಗಲೀ, ನಡೆದಾಡುವ ವ್ಹೀಲ್ ಚೇರ್ ಆಗಲೀ, ಮಾಸಿಕ ಭತ್ಯೆಯಾಗಲೀ ಸಿಗುತ್ತಿಲ್ಲ. ಈ ಬಗ್ಗೆ ಸೋಮವಾರಪೇಟೆಗೂ ಹಲವು ಬಾರಿ ಸುತ್ತಾಡಿ ಸಾಕಾಯಿತು. ಮಡಿಕೇರಿಗೂ ಕಷ್ಟದಿಂದ ಕರೆದುಕೊಂಡು ಬಂದರು. ಆದರೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಕೂಲಿ ಕೆಲಸ ಬಿಟ್ಟು ಬದುಕು ಸಾಗಿಸಲಾಗುವದಿಲ್ಲವೆಂದು ಎಲ್ಲವನ್ನು ಮರೆತು ಬಿಟ್ಟಿದ್ದೇವೆ ಎಂದು ಬಾಲಕಿ ಹರಿಣಿಯ ಪೆÇೀಷಕರು ನೊಂದು ನುಡಿಯುತ್ತಾರೆ. ಹಾಗಾಗಿ ಈ ಅಂಗವೈಕಲ್ಯದ ಬಾಲಕಿಯನ್ನು ಆರೈಕೆ ಮಾಡಲು 85 ರ ಪ್ರಾಯದ ವಯೋವೃದ್ಧೆಯನ್ನು ಬಿಟ್ಟು ಕೂಲಿಗೆ ತೆರಳುವ ದಂಪತಿಗಳಿಗೆ ಇಲಾಖೆ ಅಥವಾ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧಿಕಾರಿಗಳು ನೆರವಾಗಬೇಕಿದೆ.

- ಕೆ.ಎಸ್. ಮೂರ್ತಿ