ಮಡಿಕೇರಿ, ಅ.28: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದಿಂದ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಕವನ ಸ್ಪರ್ಧೆಯನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು. ಕೋವಿಡ್-19 ಕವನ ಸ್ಪರ್ಧೆಯ ವಿಷಯವಾಗಿತ್ತು.
37 ಅತ್ಯುತ್ತಮ ಕವನಗಳು ಸ್ಪರ್ಧೆಗೆ ಆನ್‍ಲೈನ್ ನಲ್ಲಿ ಬಂದಿದ್ದು ಅದರಲ್ಲಿ 7 ಕವನಗಳು ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಬಹುಮಾನಗಳನ್ನು ನ. 15 ರಂದು ನಡೆಯಲಿರುವ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ನೀಡಲಾಗುವುದು ಎಂದು ಎಫ್‍ಎಂಕೆಎಂಸಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.
ದಿಲೀಪ್ ಎಲ್.ವೈ (ಪ್ರಥಮ-ಕನ್ನಡ), ರಚನ ಎಸ್.ಎಂ. (ದ್ವಿತೀಯ-ಕನ್ನಡ), ವೇದಶ್ರೀ ಜಿ.ಎಂ.(ದ್ವಿತೀಯ-ಕನ್ನಡ), ಯಶಸ್ವಿ ಸಿ.ಟಿ (ದ್ವಿತೀಯ- ಇಂಗ್ಲೀಷ್), ಅವಿನಾಶ್(ತೃತೀಯ), ಎಚ್.ಆರ್.ಹೇಮಾವತಿ(ತೃತೀಯ), ಅರ್ಪಿತ ಡಿ.ರೈ (ತೃತೀಯ-ಇಂಗ್ಲೀಷ್) ಇವರುಗಳು ಬಹುಮಾನಕ್ಕೆ ಆಯ್ಕೆ ಆಗಿದ್ದಾರೆ.