ಶ್ರೀಮಂಗಲ, ಅ. 28: ಕಾವೇರಿ ಚಂಗ್ರಾಂದಿ ನಮ್ಮೆಯ ಪ್ರಯುಕ್ತ, ಪತ್ತಲೋದಿ ದಿವಸದಂದು ಅಂಜಿಕೇರಿ ನಾಡ್ ಕೂಟ ಹುದಿಕೇರಿಯ ಸದಸ್ಯರು ಶ್ರಮದಾನ ಮಾಡಿದರು. ಹುದಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನವನ್ನು ಕಳೆ ಕೊಚ್ಚುವ ಮೂಲಕ ಶುಚಿ ಮಾಡಿದರು.
ಸುಮಾರು 5 ವರ್ಷಗಳಿಂದ ಅಂಜಿಕೇರಿ ನಾಡ್ ಕೂಟದ ಸದಸ್ಯರು ಈ ಮೈದಾನದ ಶುಚಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ.