ವೀರಾಜಪೇಟೆ ವರದಿ,ಅ.28: ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಹಾಗೂ 341 ವಿಧಿಯಂತೆ ಎಸ್.ಟಿ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ಮತ್ತು ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ, ಸಂಸ್ಕøತಿಯ ರಕ್ಷಣೆ ಸಂವಿಧಾನಿಕ ಹಕ್ಕೊತ್ತಾಯವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಆಗ್ರಹಿಸಿದರು. ಐಮಂಗಲ, ಮಗ್ಗುಲ, ಕುಕ್ಲೂರು, ಚೆಂಬೆಬೆಳ್ಳೂರು ಗ್ರಾಮ ಒಳಗೊಂಡ ಎಡೆನಾಲ್ಕುನಾಡು ಮಗ್ಗುಲ ಗ್ರಾಮದ ನಾಣೆಬಾಣೆ ಮಂದಿನಲ್ಲಿ ನಡೆದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ನಾಚಪ್ಪ ಕೊಡವ ಬುಡಕಟ್ಟು ಕುಲವನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ನಿರ್ಣಯವನ್ನು ಗುರುಕಾರೋಣ, ಸೂರ್ಯ- ಚಂದ್ರ ಭೂಮಿ ತಾಯಿ, ಜಲದೇವಿ ಕಾವೇರಿಯನ್ನು ಸಾಕ್ಷಿಕರಿಸಿ, ಜನಸ್ತೋಮದ ಅಂಗೀಕಾರ ಪಡೆಯಲಾಯಿತು. ಮಗ್ಗುಲ ಗ್ರಾಮದ ಊರು ತಕ್ಕರಾದ ಚೊಕ್ಕಂಡ ಕುಟುಂಬಸ್ತರು, ಚೊಕ್ಕಂಡ ರಮೇಶ್ ಮಂದಣ್ಣ ಹಾಗೂ ಇತರರು ಇದ್ದರು.