ಗುಡ್ಡೆಹೊಸೂರು, ಅ. 28: ಇಲ್ಲಿನ ಗ್ರಾ.ಪಂ. ಬೂತ್ ನಂ. 175ರ ಬೂತ್ ಅಧ್ಯಕ್ಷ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಬೂತ್ ಸಮಿತಿ ಸಭೆ ಕಲಾಮಂದಿರದಲ್ಲಿ ನಡೆಯಿತು. ಈ ಸಂದರ್ಭ ಪಂಚರತ್ನ ಕಮಿಟಿ ರಚಿಸಲಾಯಿತು. ಸಭೆಯಲ್ಲಿ ಶಕ್ತಿ ಕೇಂದ್ರದ ಪ್ರಮುಖ ಪ್ರವೀಣ್, ತಾ. ಪ್ರದಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಗೌತಮ್, ಜಿಲ್ಲಾ ಕಾರ್ಯದರ್ಶಿ ಪುಷ್ಪ ನಾಗೇಶ್, ಬೂತ್ ಸಮಿತಿಯ ಸದಸ್ಯರು, ಪಕ್ಷದ ಮುಖಂಡರು ಭಾಗವಹಿಸಿದ್ದರು. ಮಂದಿನ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಎಂ.ಡಿ. ಕೃಷ್ಣಪ್ಪ ಸಭೆಯಲ್ಲಿ ತಿಳಿಸಿದರು.