ಪೆರಾಜೆ, ಅ. 28: ಪ್ರತಿವರ್ಷ ದಂತೆ ಇಲ್ಲಿಯ ಶ್ರೀ ಶಾಸ್ತಾವು ಪೆರಾಜೆ, ಅ. 28: ಪ್ರತಿವರ್ಷ ದಂತೆ ಇಲ್ಲಿಯ ಶ್ರೀ ಶಾಸ್ತಾವು ಭಕ್ತಿಯಿಂದ ನಡೆಸಲಾಯಿತು. ಈ ಸಂದರ್ಭ ವಾಹನ ಮಾಲಿಕರು, ದೇವಸ್ಥಾನದ ಆಡಳಿತ ಮಂಡಳಿ ಯವರು, ಸದಸ್ಯರು, ತಕ್ಕ ಮುಖ್ಯಸ್ಥರುಗಳು, ಭಕ್ತಾದಿಗಳು, ಊರಿನವರು ಭಾಗವಹಿಸಿದ್ದರು.

ಕೋಟೆ ಶಾಲಾ ವಠಾರದಲ್ಲಿ

ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಮತ್ತು ಯುವಕೋಟೆ ಯುವಕಮಂಡಲ ಪುತ್ಯಪೆರಾಜೆ ಇವರ ವತಿಯಿಂದ ಆಯುಧ ಪೂಜೆ ಮತ್ತು ವಾಹನ ಪೂಜೆ ಕಾರ್ಯಕ್ರಮವು ಶ್ರೀ ಶಾಸ್ತಾವು ದೇವಸ್ಥಾನದ ಅರ್ಚಕರಾದ ವೆಂಕಟರಮಣ ಕೆ ಪಾಂಙಣ್ಣಾಯ ಅವರ ನೇತೃತ್ವದಲ್ಲಿ ಕೋಟೆ ಶಾಲಾ ವಠಾರದಲ್ಲಿ ಸರಳವಾಗಿ ನಡೆಯಿತು.

ಈ ಸಂದರ್ಭ ಯುವಕೋಟೆ ಯುವಕ ಮಂಡಲದ ಅಧ್ಯಕ್ಷ ಲಿಖಿನ್ ಅಡ್ಕದ, ಗೌರವಾಧ್ಯಕ್ಷ ಶುಭಾಶ್ ಬಂಗಾರಕೋಡಿ, ಗೌರವ ಸಲಹೆಗಾರ ಚಿನ್ನಪ್ಪ ಅಡ್ಕ ಸೇರಿದಂತೆ ಭಜನಾ ಮಂಡಳಿ ಹಾಗೂ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.