ಶ್ರೀಮಂಗಲ, ಅ. 27: ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಶೋಭಿತಾ ಅನ್ನ್ ಕೋಶಿ ಅವರು ಎಂ.ಎ. ಇಂಗ್ಲೀಷ್ ಲಿಟರೇಚರ್ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಎರಡು ದತ್ತಿನಿಧಿ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ. ಇವರು ಕುಟ್ಟ ಹೂವಿನಕಾಡು ತೋಟದ ವ್ಯವಸ್ಥಾಪಕರಾದ ಅನಿಲ್ ಕೋಶಿ-ಶಾಂತಿ ಮೇರಿ ಕೋಶಿ ಅವರ ಪುತ್ರಿಯಾಗಿರುತ್ತಾರೆ.