ಮಡಿಕೇರಿ, ಅ. 26: ಮೇಕೇರಿ ಗ್ರಾಮದ ತೋರೆರ ಮನೆ, ಮಡಿಯಾನ ಮನೆಗೆ ಹಾಗೂ ತಲಾಕೋಡು ಭಾಗಕ್ಕೆ ತೆರಳುವ ಕಾಂಕ್ರಿಟ್ ರಸ್ತೆಯನ್ನು ವೀರಾಜ ಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಗ್ರಾಮಸ್ಥರ ಕೋರಿಕೆ ಹಾಗೂ ಸಹಕಾರದ ಮೇರೆಗೆ ಉತ್ತಮ ರಸ್ತೆಯಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ತಿಳಿಸಿದರು.
ತಲಾಕೋಡು ಭಾಗದ ಗ್ರಾಮಸ್ಥ ವಸಂತ್ ತೋರೆರ ಶಾಸಕರ ಪರಿಶ್ರಮದಿಂದ 2 ಕಿಲೋಮೀಟರ್ ಉದ್ದ 4 ಮೀಟರ್ ಅಗಲದ ಉತ್ತಮ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು, ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉದ್ದ 4 ಮೀಟರ್ ಅಗಲದ ಉತ್ತಮ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು, ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಅಭಿಯಂತರರಾದ ಶ್ರೀಕಂಠಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಕುಮುದ ರಶ್ಮಿ, ಬಿಜೆಪಿ ಮಡಿಕೇರಿ ತಾಲೂಕು ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಗುತ್ತಿಗೆದಾರ ಸತೀಶ್ ಪೂಣಚ್ಚ, ಮಡಿಕೇರಿ ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಹೇಮಂತ್ ತೋರೆರ, ಮೇಕೇರಿ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಇತರರು ಹಾಜರಿದ್ದರು.