ಸುಂಟಿಕೊಪ್ಪ, ಅ. 26: 7ನೇ ಹೊಸಕೋಟೆ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಆರೋಗ್ಯ ವತಿಯಿಂದ ಪುಟ್ಟ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

6 ವರ್ಷದವರೆಗಿನ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಆರೋಗ್ಯ ಇಲಾಖೆಯ ವೈದ್ಯ ಭರತ್ ಮಾತನಾಡಿ, ಮಕ್ಕಳಲ್ಲಿ ಅಪೌಷ್ಟಿಕತೆಯಿಂದ ಬೆಳೆವಣಿಗೆಯಲ್ಲಿ ಕುಂಠಿತವಾಗುತ್ತಿದೆ. ಮಕ್ಕಳಿಗೆ ದೈಹಿಕ ಸದೃಢ ಆರೋಗ್ಯವನ್ನು ನೀಡುವ ದಿಸೆಯಲ್ಲಿ ಮಕ್ಕಳ ಪೋಷಕರಿಗೆ ಸಂಪೂರ್ಣ ಮಾಹಿತಿ ಹಾಗೂ ಬಾಲಸ್ವಾಸ್ಥ್ಯ ಆರೋಗ್ಯ ಯೋಜನೆಯಡಿಯಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ 35 ರಿಂದ 40 ಮಕ್ಕಳ ತೂಕ ಮತ್ತು ಎತ್ತರ ಅಳತೆಯನ್ನು ನಡೆಸಿ ಪೋಷಣೆ ಬೆಳವಣಿಗೆ ಬಗ್ಗೆ ತಾಯಂದಿರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭ ಆರೋಗ್ಯ ಸಹಾಯಕಿ ಸುನೀತಾ, ವೆನಿಲ್ಲ, ಅಂಗನವಾಡಿ ಕಾರ್ಯಕರ್ತೆ ಬಿಂದು, ಸಹಾಯಕಿ ಕೌಶಿ ಮತ್ತಿತರರು ಇದ್ದರು.