ಮಡಿಕೇರಿ, ಅ. 27: ಪತ್ತಲೋದಿ ದಿನದ ಪ್ರಯುಕ್ತ ಇಂದು ಸಿ.ಎನ್.ಸಿ ವತಿಯಿಂದ ಅಗಲಿದ ಪೂರ್ವಜರಿಗೆ ಗೌರವ ಅರ್ಪಿಸಲಾಯಿತು. ಮಡಿಕೇರಿಯ ಕೋಟೆಯಲ್ಲಿ ಶತಮಾನಗಳ ಹಿಂದೆ ಅನೇಕ ರಾಜರು ಕೊಡವ ಬುಡಕಟ್ಟು ಕುಲದವರನ್ನು ಹಿಂಸಿಸಿ ಬಲಿಪಡೆದಿದ್ದರು. ಈ ನಮ್ಮ ಪೂರ್ವಜರ ತ್ಯಾಗವನ್ನು ನೆನಪಿಸಿಕೊಂಡು ಇಂದು ಅವರ ಆತ್ಮಗಳಿಗೆ ಶಾಂತಿ ಕೋರಿ ಗೌರವ ಸಲ್ಲಿಸಲಾಗುತ್ತಿರುವುದಾಗಿ ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಈ ಸಂದರ್ಭ ಹೇಳಿದರು.
ಕೋಟೆ ಆವರಣದಲ್ಲಿ ಮೀದಿ ಇಟ್ಟ ಬಳಿಕ ಸಿ.ಎನ್.ಸಿಯ ಸತತ ಹೋರಾಟವಾಗಿರುವ ಕೊಡವರಿಗೆ ಎಸ್.ಟಿ ಪಟ್ಟಿ ಹಾಗೂ ಭೂ ರಾಜಕೀಯ ಸ್ವಾಯತ್ತತೆ ಶೀಘ್ರದಲ್ಲೆ ದೊರಕುವಂತೆ ನರೆದಿದ್ದ ಸರ್ವರು ಪ್ರಾರ್ಥಿಸಿದರು. ಈ ಸಂದರ್ಭ ಪುಲ್ಲೆರ ಕಾಳಪ್ಪ, ಚಂಬಂಡ ಜನತ್, ಮನೊಟ್ಟಿರ ಚಿನ್ನಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ತೆನ್ನಿರ ಮೈನ, ಜೋಯಪ್ಪ, ಪುಡಿಯೊಕ್ಕಡ ಕಾಶಿ ಹಾಜರಿದ್ದು ಹಿರಿಯರನ್ನು ಸ್ಮರಿಸಿದರು.