ಮಡಿಕೇರಿ, ಅ. 27: ಇಲ್ಲಿಗೆ ಸನಿಹದ ಮಕ್ಕಂದೂರುವಿನಲ್ಲಿರುವ ಪಿ.ಎಂ. ಸುಲೋಚನ ಅವರಿಗೆ ಸೇರಿದ ಹೊಟೇಲ್‍ನಲ್ಲಿ ಸೇರಿಕೊಂಡಿದ್ದ ಸುಮಾರು 9 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು.

ಹೊಟೇಲ್‍ನ ಬಿಲದೊಳಗೆ ಸೇರಿಕೊಂಡಿದ್ದ ಕಾಳಿಂಗನನ್ನು ಕಂಡ ಸ್ಥಳೀಯರು ಉರಗ ಪ್ರೇಮಿ, ಹಾಕತ್ತೂರು ಗ್ರಾ.ಪಂ. ಮಾಜಿ ಸದಸ್ಯ ಪಿಯುಶ್ ಪೆರೆರಾ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ ಪೆರೆರಾ ಅದನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾಳಿಂಗ ನನ್ನು ವೀಕ್ಷಿಸಲು ಜಮಾಯಿಸಿದ ಸಾರ್ವಜನಿಕರು ವೀಡಿಯೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.