ಸುಂಟಿಕೊಪ್ಪ, ಅ. 27: ಬಿಜೆಪಿ ಪಕ್ಷದ ವತಿಯಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮತ್ತು ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಲಾಯಿತು. ಸುಂಟಿಕೊಪ್ಪ ನಗರ ಬಿಜೆಪಿ ಘಟಕದ ವತಿಯಿಂದ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ವಿತರಿಸಲು ಠಾಣಾಧಿಕಾರಿ ದಿಲೀಪ್‍ಕುಮಾರ್ ಅವರಿಗೆ ಮಾಸ್ಕ್ ನೀಡಲಾಯಿತು.

ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ. ಪ್ರಶಾಂತ್ ಮಾತನಾಡಿ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದರು. ಈ ಸಂದರ್ಭ ಠಾಣಾಧಿಕಾರಿ ದಿಲೀಪ್‍ಕುಮಾರ್, ವೆಂಕಟರಮಣ, ಶಕ್ತಿ ಕೇಂದ್ರದ ಪ್ರಮುಖ್ ಕೆ.ಕೆ. ವಾಸುದೇವ, ಪ್ರಶಾಂತ್, ನಗರ ಯುವ ಮೋರ್ಚಾ ಅಧಕ್ಷ ವಿಘ್ನೇಶ್ ಎಸ್. ಸುಂಟಿಕೊಪ್ಪ ಕೃಷಿ ಮೋರ್ಚಾ ಅಧ್ಯಕ್ಷ ರಮೇಶ್ ಪಿಳ್ಳೆ, ಕಾರ್ಯಕರ್ತರಾದ ಶಿವಮಣಿ, ಶ್ರೀರಾಮ್‍ರೈ, ಪ್ರಶಾಂತ್ ಬಾಳೆಕಾಡು, ಬಿ.ಕೆ. ವಿಶ್ವನಾಥ ರೈ, ಸುನೀಲ್, ಸಿ.ಸಿ, ಸತೀಶ್ ಪನ್ಯ ಹಾಜರಿದ್ದರು.