ಸೋಮವಾರಪೇಟೆ, ಅ. 27: ಕೊಡಗು ಜಿಲ್ಲಾ ಛಾಯಾಗ್ರಾಹಕರ ಅಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಮೀಪದ ಹೋಂಸ್ಟೇನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷ ಸುರೇಶ್ ಮಾವಕ್ಕರ್, ಪ್ರಧಾನ ಕಾರ್ಯದರ್ಶಿ ದೀಪಕ್‍ಕುಮಾರ್, ಉಪಾಧ್ಯಕ್ಷ ಜನಾರ್ಧನ್, ನಿರ್ದೇಶಕರುಗಳಾದ ವಸಂತ್ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಚಂದನ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಡೇವಿಡ್, ಖಜಾಂಚಿ ಸುದೀಪ್, ಪದಾಧಿಕಾರಿಗಳಾದ ವಿನೋದ್ ಜಯರಾಮ್, ಶೇಷಪ್ಪ, ಧರ್ಮಪ್ಪ, ಸುನಿಲ್, ಮಂಜುನಾಥ್, ಪಜಲ್, ಅರುಣ್, ಭರತ್ ಇದ್ದರು.