ಸುಂಟಿಕೊಪ್ಪ, ಅ. 27: ಕೊರೊನಾ ವೈರಸ್ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಂಟಿಕೊಪ್ಪ ನೂತನ ಠಾಣಾಧಿಕಾರಿ ಬಿ.ಎಂ. ದಿಲೀಪ್ಕುಮಾರ್ ಮಾತನಾಡಿದರು.
ಸುಂಟಿಕೊಪ್ಪ ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಕೊರೊನಾ ಕುರಿತು ಪ್ರಚಾರ ಫಲಕವನ್ನು ಅಳವಡಿಸಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದ ಬಿ.ಎಂ. ದಿಲೀಪ್ಕುಮಾರ್ ವೈಯಕ್ತಿಕ ಆರೋಗ್ಯ ಹಾಗೂ ಕುಟುಂಬದವರ ಮಂದಿಯ ಸುರಕ್ಷತೆಯ ದಿಸೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕಿವಿಮಾತು ಹೇಳಿದರು. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ಜನತೆಗೆ ದಂಡ ವಿಧಿಸಲಾಗುವುದು ಎಂದರು.
ಈ ಸಂದರ್ಭ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ, ಮುಖ್ಯಪೇದೆ ಸತೀಶ್, ಖಾದರ್, ಮಂಜುನಾಥ್, ಪೇದೆ ಸಂಪತ್ ಹಾಗೂ ಇತರರು ಹಾಜರಿದ್ದರು.