ಮಡಿಕೇರಿ, ಅ. 23: ಅಕ್ರಮ ಮದ್ಯ, ಗಾಂಜಾ, ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಜಾಲವನ್ನು ಹತ್ತಿಕ್ಕುತ್ತಿರುವ ಬೆನ್ನಲ್ಲೇ ಚಟಕ್ಕೆ ಬಿದ್ದ ಯುವ ಪೀಳಿಗೆ ಇದೀಗ ಮತ್ತೊಂದು ರೀತಿಯ ಮಾದಕ ವಸ್ತುಗಳ ದಾಸರಾಗುತ್ತಿರುವದು ಕಂಡು ಬಂದಿದೆ.ಗಾಂಜಾ, ಡ್ರಗ್ಸ್ ಸಿಗದೇ ಇರುವದರಿಂದ ನಶೆ ಏರಿಸುವ ಮತ್ತು ಬರಿಸುವ ಮಾತ್ರೆಗಳ ಸೇವನೆಗೆ ಯುವ ಪೀಳಿಗೆ ಮುಂದಾಗಿರುವದು ಕಂಡು ಬಂದಿದ್ದು, ಈ ಜಾಲವನ್ನು ಕೂಡ ಬೇಧಿಸಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಓರ್ವ ವಿದ್ಯಾರ್ಥಿ ಸೇರಿದಂತೆ ಈರ್ವರನ್ನು ಬಂಧಿಸಿದ್ದಾರೆ.ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್‍ವೊಂದರ ಮಾಲೀಕರ ಶಾಮೀಲಿನೊಂದಿಗೆ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಪತ್ತೆ ಹಚ್ಚಲಾಗಿದೆ.

(ಮೊದಲ ಪುಟದಿಂದ) ಮಾದಕ ವ್ಯಸನಿಗಳಾಗಿದ್ದ ಯುವಕರು ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್‍ಗಳಿಂದ ಖರೀದಿಸಿ ಬಳಕೆ ಮಾಡುತ್ತಿರುವುದಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಡಿಸಿಐಬಿ ಘಟಕದ ಪೊಲೀಸರು ಮಾಹಿತಿ ಮೇರೆ ಗೋಣಿಕೊಪ್ಪಲಿನ ಸ್ಪರ್ಶ ಮೆಡಿಕಲ್ ಶಾಪ್‍ವೊಂದರಿಂದ ನಶೆಯೇರುವ ಮಾತ್ರೆಗಳನ್ನು ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ನಶೆಯೇರುವ ಮಾತ್ರೆಗಳ ಬಾಕ್ಸ್ ಸಮೇತ ಪತ್ತೆಹಚ್ಚಿದ್ದಾರೆ. ಇದರಿಂದ ಜಿಲ್ಲೆಯಲ್ಲಿರುವ ಕೆಲ ಮೆಡಿಕಲ್ ಶಾಪ್‍ನ ಮಾಲೀಕರು ನಶೆಯೇರುವ (ಮೊದಲ ಪುಟದಿಂದ) ಮಾದಕ ವ್ಯಸನಿಗಳಾಗಿದ್ದ ಯುವಕರು ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್‍ಗಳಿಂದ ಖರೀದಿಸಿ ಬಳಕೆ ಮಾಡುತ್ತಿರುವುದಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಡಿಸಿಐಬಿ ಘಟಕದ ಪೊಲೀಸರು ಮಾಹಿತಿ ಮೇರೆ ಗೋಣಿಕೊಪ್ಪಲಿನ ಸ್ಪರ್ಶ ಮೆಡಿಕಲ್ ಶಾಪ್‍ವೊಂದರಿಂದ ನಶೆಯೇರುವ ಮಾತ್ರೆಗಳನ್ನು ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ನಶೆಯೇರುವ ಮಾತ್ರೆಗಳ ಬಾಕ್ಸ್ ಸಮೇತ ಪತ್ತೆಹಚ್ಚಿದ್ದಾರೆ. ಇದರಿಂದ ಜಿಲ್ಲೆಯಲ್ಲಿರುವ ಕೆಲ ಮೆಡಿಕಲ್ ಶಾಪ್‍ನ ಮಾಲೀಕರು ನಶೆಯೇರುವ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಪಿಎಸ್‍ಐ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿಗಳಾದ ಎಎಸ್‍ಐ ಹಮೀದ್, ಯೋಗೇಶ್‍ಕುಮಾರ್, ನಿರಂಜನ್, ವಸಂತ, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್‍ಕುಮಾರ್ ಹಾಗೂ ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಾದಕ ವಸ್ತು ನಿಯಂತ್ರಣಕ್ಕೆ ಬಂದ ಹಿನ್ನೆಲೆ ನಶೆಯೇರುವ ಮಾತ್ರೆಗಳ ಬಳಕೆಯತ್ತ ಯುವಕರು ಮುಂದಾಗಿರುವ ಬಗ್ಗೆ ಮಾಹಿತಿಗಳು ಬರುತ್ತಿರುವುದರಿಂದ ಮೆಡಿಕಲ್ ಶಾಪ್‍ಗಳ ಮಾಲೀಕರು ನಿಗಾವಹಿಸುವಂತೆ ಪೊಲೀಸ್ ಅಧೀಕ್ಷಕರು ಮನವಿ ಮಾಡಿಕೊಂಡಿದ್ದಾರೆ.