ಶನಿವಾರಸಂತೆ, ಅ. 22: ಸಮೀಪದ ಕೊಡ್ಲಿಪೇಟೆ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಆಡಳಿತ ಮಂಡಳಿ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ನಿತ್ಯ ದುರ್ಗಾರಾಧನೆ ನಡೆಯುತ್ತಿದೆ. 5ನೇ ದಿನ ದೇವಿಗೆ ವಿಶೇಷ ಅಲಂಕಾರ ಮಾಡಿ ಸರಸ್ವತಿ ಆವಾಹನೆ ಮಾಡಿ ಪೂಜಾವಿಧಿ ನೆರವೇರಿಸಲಾಯಿತು. ಚಂಡಿಕಾ ಪಾರಾಯಣ ಮಾಡಲಾಯಿತು. ಸೀಮಿತ ಸಂಖ್ಯೆಯ ಭಕ್ತರು, ಅರ್ಚಕ ಮಹಾಬಲ ಜೋಷಿ, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.