ಮಡಿಕೇರಿ, ಅ. 22: ಪ್ರಸಕ್ತ (2020-21) ಸಾಲಿನ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಮಡಿಕೇರಿ ತಾಲೂಕಿನಲ್ಲಿ ಈಗಾಗಲೇ ಕಿತ್ತಳೆ ಹಾಗೂ ಕಾಳುಮೆಣಸು ಗಿಡಗಳನ್ನು ಸಹಾಯಧನದ ರೂಪದಲ್ಲಿ ಪಡೆದಂತಹ ರೈತರು, ಜೈವಿಕ ಗೊಬ್ಬರವನ್ನು ಮಡಿಕೇರಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಈಗಾಗಲೇ ನೀಡಿರುವ ವಿತರಣಾ ಚೀಟಿಯನ್ನು ಹಾಜರುಪಡಿಸಿ, ತೋಟಗಾರಿಕೆ ಇಲಾಖೆಯಿಂದ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.