ಮಡಿಕೇರಿ, ಅ. 22: ಮಡಿಕೇರಿ ತಾಲೂಕಿನ ತಾಳತ್ತಮನೆಯಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ದುರ್ಗಾ ಭಗವತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ತಾ. 23 ರಂದು (ಇಂದು) ಸಂಜೆ 6 ಗಂಟೆಗೆ ದುರ್ಗಾ ಪೂಜೆ ಏರ್ಪಡಿಸಲಾಗಿದೆ ಹಾಗೂ ನವೆಂಬರ್ ತಿಂಗಳಿನಿಂದ ಪ್ರತೀ ತಿಂಗಳ ಮೊದಲನೇ ಶುಕ್ರವಾರದಂದು ಸಂಜೆ 6 ಗಂಟೆಗೆ ಸಾಮೂಹಿಕ ದುರ್ಗಾ ಪೂಜೆ ನಡೆಸಲಾಗುತ್ತದೆ ಎಂದು ದೇವಾಲಯ ಸಮಿತಿಯ ಪ್ರಕಟಣೆ ತಿಳಿಸಿದೆ.