ಸೋಮವಾರಪೇಟೆ, ಅ. 21: ತಾಲೂಕು ಸಹಕಾರ ಯೂನಿಯನ್‍ನ ಅಧ್ಯಕ್ಷರಾಗಿ ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ರಿಟರ್ನಿಂಗ್ ಅಧಿಕಾರಿ ಮೋಹನ್ ಅವರ ಉಪಸ್ಥಿತಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕೆ.ಟಿ. ಪರಮೇಶ್, ಉಪಾಧ್ಯಕ್ಷರಾಗಿ ಡಿ.ಬಿ. ಧರ್ಮಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ಇದಕ್ಕೂ ಮೊದಲು ಸಹಕಾರ ಯೂನಿಯನ್‍ಗೆ 15 ಮಂದಿ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಸಂದರ್ಭ ನಿರ್ದೇಶಕರುಗಳಾದ ಎಸ್.ಪಿ. ಪೊನ್ನಪ್ಪ, ಶಿವಪ್ಪ, ರಘು, ಸುಮಾ ಸುದೀಪ್, ಸವಿತ ಸತೀಶ್, ಲೀಲಾ ಮೇದಪ್ಪ, ರಮೇಶ್, ದೇಶ್‍ರಾಜ್, ಕಾಶಿ ಅಮೃತ್ ಅವರುಗಳು ಉಪಸ್ಥಿತರಿದ್ದರು.