ಮಡಿಕೇರಿ, ಅ. 21: ಮಡಿಕೇರಿಯ ಕೊಡಗು ಸೇವಾ ಕೇಂದ್ರದ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ 2 ಟಿ.ವಿ.ಯನ್ನು ಕೊಡುಗೆಯಾಗಿ ನೀಡಲಾಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಲೋಕೇಶ್ ಅವರು ಕೊಡುಗೆ ಸ್ವೀಕರಿಸಿದರು. ಪುರುಷ ಹಾಗೂ ಮಹಿಳಾ ವಾರ್ಡ್‍ಗೆ ಇದನ್ನು ನೀಡಲಾಗಿದೆ. ಸೇವಾ ಕೇಂದ್ರ ಪ್ರಮೋದ್ ಸೋಮಯ್ಯ, ಮಂದಪಂಡ ಅಪ್ಪಚ್ಚು ಟಿ.ವಿ. ವಿತರಿಸಿದರು.