ಮಡಿಕೇರಿ, ಅ. 18: ಜಿಲ್ಲೆಯ ವಿದ್ಯಾರ್ಥಿಗಳಾದ ಆರ್ನವ್ ಅಯ್ಯಪ್ಪ ಹಾಗೂ ಶಶಾಂಕ್ ನೀಟ್ ಹಾಗೂ ಜೆಇಇ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಡಿಕೇರಿಯ ವಕೀಲ ಪಾಸುರ ಪ್ರೀತಮ್-ಹೇಮ ದಂಪತಿಯ ಪುತ್ರ ಆರ್ನವ್ ವೈದ್ಯಕೀಯ ಕ್ಷೇತ್ರ ಸಂಬಂಧ ನೀಟ್ ಪರೀಕ್ಷೆಯಲ್ಲಿ ಭಾರತದಲ್ಲಿ 440ನೇ ರ್ಯಾಂಕ್ ಪಡೆದಿದ್ದಾನೆ. ಆರ್ನವ್ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮುಗಿಸಿದ್ದಾನೆ.
ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಕುಲಕರ್ಣಿ ಹಾಗೂ ಡಾ. ಅರುಣಾ ದಂಪತಿಯ ಪುತ್ರ ಶಶಾಂಕ್ ಇಂಜಿನಿಯರಿಂಗ್ ಸಂಬಂಧ ಜೆಇಇ ಅಡ್‍ವಾನ್ಸ್‍ಡ್ ಪರೀಕ್ಷೆಯಲ್ಲಿ ಭಾರತದಲ್ಲಿ 2,512 ರ್ಯಾಂಕ್ ಪಡೆದಿದ್ದಾನೆ. ಶಶಾಂಕ್ ಮಂಗಳೂರಿನ ಎಕ್ಸ್‍ಪರ್ಟ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮುಗಿಸಿದ್ದಾನೆ.