ನಾಪೆÇೀಕ್ಲು, ಅ. 19: ಕಾವೇರಿ ಸಂಕ್ರಮಣ ಪ್ರಯುಕ್ತ 1785ರಲ್ಲಿ ನರಮೇಧ ದುರಂತ ನಡೆದ ಸಮೀಪದ ದೇವಟಿಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಗುರುತಿಸಿರುವ ಎರಡು ಸ್ಥಳಗಳಿಗೆ ಧಾರ್ಮಿಕ ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕ ಹಾಗೂ ಪಾರಮಾರ್ತಿಕ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಕಾವೇರಿ ಸಂಕ್ರಮಣದ ಅಂಗವಾಗಿ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ನೇತೃತ್ವದ ಸಿಎನ್‍ಸಿ ಆಶ್ರಯದಲ್ಲಿ ಭಕ್ತಿ ಗೌರವಗಳೊಂದಿಗೆ ಬೊತ್ತ್ ಬಳ್ಳಿಗೆ ದೋಸೆ, ಪುಟ್ಟ್ ನೈವೇದ್ಯವನ್ನು ಅರ್ಪಿಸಲಾಯಿತು.

ನಂತರ ಮಾತನಾಡಿದ ಎನ್.ಯು. ನಾಚಪ್ಪ, 1785 ರಲ್ಲಿ ಆದ ದುರ್ಘಟನೆಯ ನೆನಪು ಪೀಳಿಗೆಯಿಂದ ಪೀಳಿಗೆಗೆ ಕೊಡವರ ಮನದಲ್ಲಿ ಒಂದು ಯಾತನಾಮಯ ಅಧ್ಯಾಯವಾಗಿ ಮುಂದುವರಿಯಲಿದೆ. ಆದ್ದರಿಂದ ಈ ನೆರಮೇಧ ಸಮಾಧಿ ಕೊಡವರಿಗೆ ಪರಮ ಪವಿತ್ರ ಕಾವೇರಿ ಸಂಕ್ರಮಣ ತೀರ್ಥಯಾತ್ರೆ ಮತ್ತು ಇನ್ನಿತರ ಸಂದರ್ಭಗಳಲ್ಲಿ ತಲಕಾವೇರಿಗೆ ದೇವಾಟ್ ಪರಂಬು ಮಾರ್ಗದಲ್ಲಿ ಹಾದುಹೋಗುವಾಗ ಅಲ್ಲಿ ಯಾತ್ರಾರ್ಥಿಗಳು 5 ನಿಮಿಷ ನಿಂತು ಮರದ ಸೊಪ್ಪಿನ ಕೊನೆಯೊಂದನ್ನು ಇಟ್ಟು ಗೌರವಾಂಜಲಿ ಅರ್ಪಿಸುವ ಪದ್ಧತಿ ಒಂದು ಪರಂಪರೆಯಾಗಿ ಇಂದಿಗೂ ಮುಂದುವರಿದಿದೆ ಎಂದರು.

ಕೊಡವರ ಪುರಾತನ ಸಂಸ್ಕøತಿಯಂತೆ ಕಾವೇರಿ ಸಂಕ್ರಮಣ(ತೊಲೆಯಾರ್ ಚಂಗ್ರಾಂದಿ)ಕ್ಕೆ ನಾಲ್ಕು ಮತ್ತು ಐದು ದಿನಗಳ ಮೊದಲು ಕೊಡಗಿನ ಭತ್ತದ ಗದ್ದೆಗಳಿಗೆ, ಬೋಟಿ ಕಳ, ಸೆಗಣಿ ಗುಂಡಿ, ಬಾವಿ, ಗೇಟ್ ಮತ್ತು ಮನೆಯ ಮುಂಭಾಗಕ್ಕೆ ಬೊತ್ತ್ ನೆಡುವ (ಕುತ್ತ್‍ವ) ಜನಪದೀಯ ಪದ್ಧತಿ ರೂಢಿಗತವಾಗಿದ್ದು, ಇದು ಅನಾದಿಕಾಲದಿಂದಲೂ ನಡೆದು ಬರುತ್ತಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವದ ಮಾರನೆಯ ದಿನ ನಸುಕಿನಲ್ಲಿ ಗದ್ದೆಯಲ್ಲಿ ನೆಡಲಾದ ಬೊತ್ತ್ ಬಳ್ಳಿಗೆ ದೋಸೆ, ಪುಟ್ಟ್ ಸಮರ್ಪಿಸುವ ಪದ್ಧತಿ ರೂಢಿಗತವಾಗಿದೆ. ಅದರಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 1785ರಲ್ಲಿ ಕೊಡವರ ನರಮೇಧ ದುರಂತ ನಡೆದ ದೇವಟಿ ಪರಂಬುವಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭ ಕಲಿಯಂಡ ಪ್ರಕಾಶ್, ಚಂಬಂಡ ಜನತ್, ಅರೆಯಡ ಗಿರೀಶ್ ಮತ್ತಿತರ ಮುಖಂಡರು ಇದ್ದರು.