ಶ್ರೀಮಂಗಲ, ಅ. 19: ಪೆÇನ್ನಂಪೇಟೆ ಬಿಜೆಪಿ ಪಕ್ಷದ ಮಹಾ ಶಕ್ತಿ ಕೇಂದ್ರದ ಪ್ರಥಮ ಸಭೆಯನ್ನು ಕಿರುಗೂರು ಶಕ್ತಿ ಕೇಂದ್ರದ ಪಕ್ಷದ ಕಚೇರಿಯಲ್ಲಿ ನಡೆಸಲಾಯಿತು. ಅಧ್ಯಕ್ಷತೆಯನ್ನು ಪೆÇನ್ನಂಪೇಟೆ ಮಹಾ ಶಕ್ತಿ ಕೇಂದ್ರದ ಸಂಚಾಲಕ ಅಲೆಮಾಡ ಸುಧೀರ್ ವಹಿಸಿದ್ದರು.

ಕಿರುಗೂರು, ಪೆÇನ್ನಂಪೇಟೆ, ಬಲ್ಯಮುಂಡೂರು ಮತ್ತು ಹುದಿಕೇರಿ ಶಕ್ತಿ ಕೇಂದ್ರದ ಪ್ರಮುಖರಾದ ಚೆಪ್ಪುಡೀರ ವಿವೇಕ್, ಮೂಕಳೇರ ಮಧುಕುಮಾರ್, ಕೋಟೆರ ಕಿಸನ್ ಉತ್ತಪ್ಪ, ಕೇಚಟ್ಟೀರ ಅರುಣ, ಬೊಜ್ಜಂಗಡ ಸುನೀಲ್, ಕೊಟ್ಟಂಗÀಡ ಪ್ರಕಾಶ್, ಸಹ ಪ್ರಮುಖ್ ಕಾಟಿಮಾಡ ರಾಜಪ್ಪ, ಕಿರಿಯಮಾಡ ಈಶ ಮಂದಣ್ಣ, ಬಾಳೇರ ಸಚಿನ್, ಎಲ್. ಸಂತೋಷ, ಚೀರಂಡ ಕಂದಸುಬ್ಬಯ್ಯ ಸಹಯೋಗದೊಂದಿಗೆ ತಾಲೂಕು ಮಾರ್ಗಸೂಚಿಯಂತೆ ಬಿ.ಎಲ್.ಓ 2 ಪಂಚರತ್ನ ಕುಟುಂಬ ಮಿಲನ ಪೇಜ್ ಪ್ರಮುಖ್ ನೇಮಿಸಬೇಕೆಂದು ಸೂಚಿಸಲಾಯಿತು.

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳನ್ನು ಒಮ್ಮತದಿಂದ ಆರಿಸಲು ತೀರ್ಮಾನಿಸಲಾಯಿತು. ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವಂತೆ ಹಾಗೂ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಅವರ ಮಾರ್ಗಸೂಚಿಯಂತೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅಲೆಮಾಡ ಸುಧೀರ್ ಅವರು ಪೆÇನ್ನಂಪೇಟೆ 1.2.3 ರ ಸಹ ಪ್ರಮುಖರಾಗಿ ಬಿ.ಎಲ್. ಮಂಜುನಾಥ್ ಅವರನ್ನು ನೇಮಕ ಮಾಡಲಾಯಿತು.