ವೀರಾಜಪೇಟೆ ವರದಿ, ಅ. 19: ವೀರಾಜಪೇಟೆ ನಗರದಿಂದ ಒಂದು ಕಿ.ಮೀ. ದೂರ ಇರುವ ಚಿಕ್ಕಪೇಟೆಯಿಂದ ಬೊಯಿಕೇರಿ- ಕದನೂರು ಗ್ರಾಮಕ್ಕೆ ಸಾಗುವ ರಸ್ತೆ ತೀರಾ ಹದಗೆಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೂಡಲೇ ರಸ್ತೆ ಹಾಗೂ ಚರಂಡಿ ದುರಸ್ತಿ ಕೈಗೊಳ್ಳುವಂತೆ ಸ್ಥಳೀಯರು ‘ಶಕ್ತಿ’ಯ ಮೂಲಕ ಆಗ್ರಹಪಡಿಸಿದ್ದಾರೆ.