ಸಿದ್ದಾಪುರ, ಅ. 19: ಬಿ.ಜೆ.ಪಿ. ಕದನೂರು ಮಹಾಶಕ್ತಿ ಕೇಂದ್ರ ಕುಟುಂಬ ಮಿಲನ ಕಾರ್ಯಕ್ರಮ ಅಮ್ಮತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಮಾಡು ಶಕ್ತಿ ಕೇಂದ್ರದ ಪ್ರಮುಖ ಕುಂಞಂಡ ನಿರು ನಾಣಯ್ಯ ಅವರ ಅಧ್ಯಕ್ಷತೆÉಯಲ್ಲಿ ನಡೆಯಿತು.
ಪಕ್ಷ ಸಂಘಟನೆ ದೃಷ್ಟಿಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕದನೂರು ಮಹಾಶಕ್ತಿ ಕೇಂದ್ರದ ಪ್ರಮುಖರಾದ ಮಾಚಿಮಂಡ ಸುವಿನ್ ಗಣಪತಿ ಅವರು ಜನಸೇವೆಗೆ ಸನ್ನದ್ದರಾಗಿರುವವರಿಗೆ ಬೆಂಬಲ ಸೂಚಿಸಲು ಭಾರತೀಯ ಜನತಾ ಪಕ್ಷ ಸದಾ ಸಿದ್ಧವಾಗಿದ್ದು, ಇಂತಹ ಕಾರ್ಯಕ್ರಮದ ಮೂಲಕ ಪಕ್ಷ ಸಂಘಟಿಸಲು ಶ್ರಮಿಸಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಜಿಲ್ಲಾ ಸಂಪರ್ಕ್ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಕುಟುಂಬ ಪ್ರಬಂಧನ್ ಸಂಯೋಜಕ ಟಿ.ಸಿ. ಚಂದ್ರನ್ ಸಂಘಟನೆ ಕುರಿತು ಮಾತನಾಡಿದರು.
ಬಿ.ಜೆ.ಪಿ ಬೂತ್ ಅಧ್ಯಕ್ಷ ಅಭಿಜಿತ್ ಹೆಚ್.ಎ. ಸ್ವಾಗತಿಸಿ ನಿರೂಪಿಸಿ, ಜೀವನ್ ವಂದಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಮಾಚಿಮಂಡ ವಸಂತ್, ಲಿಜೇಶ್ ಎಂ.ಎಂ., ಕೆ.ಯು. ಗಣಪತಿ, ಮುಕ್ಕಾಟಿರ ಕಿಟ್ಟು ಮಾದಪ್ಪ ಹಾಗೂ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು.