ಮಡಿಕೇರಿ, ಅ. 19: ನಗರದ ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ತಾ. 26 ರವರೆಗೆ ಅಲಂಕಾರ ಸೇವೆಗಳು ನಡೆಯಲಿವೆ. ತಾ. 20 ರಂದು ಹಣ್ಣಿನ ಅಲಂಕಾರ, ತಾ. 21 ರಂದು ವಿಳ್ಯದೆಲೆ, ತಾ. 22 ರಂದು ಅರಿಶಿಣ ಕುಂಕುಮ ಅಲಂಕಾರ, ತಾ. 23 ರಂದು ಕಾಳಿ ಅಲಂಕಾರ, ತಾ. 24 ರಂದು ಸರಸ್ವತಿ ಅಲಂಕಾರ, ತಾ. 25 ರಂದು ಸೀರೆ ಅಲಂಕಾರ, ತಾ. 26 ರಂದು ಶ್ರೀ ರಾಜರಾಜೇಶ್ವರಿ ಅಲಂಕಾರ ಸೇವೆಗಳನ್ನು ಏರ್ಪಡಿಸಲಾಗಿದೆ.