ಕೂಡಿಗೆ, ಅ. 19: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಕೊಡಗು ಜಿಲ್ಲಾ ಕೃಷಿ ಸಂಸ್ಕøತಿಯ ಕುರಿತು ಅಂತರ್ಜಾಲ ವಿಚಾರ ಸಂಕಿರಣ (ವಿಬಿನಾರ್) ಗೂಗಲ್ ಮೀಟ್ ಏರ್ಪಡಿಸಲಾಗಿತ್ತು.
‘ಕೃಷಿ ಮತ್ತು ಕೊಡಗಿನ ಕಲೆಗಳ ನಡುವಿನ ಅವಿನಾಭಾವ ಸಂಬಂಧ’ದ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಮಾತನಾಡಿ, ಕೊಡಗು ಜಿಲ್ಲೆಯ ನಿವಾಸಿಗಳು ಕೃಷಿಯನ್ನು ಅವಲಂಬಿತರಾಗಿದ್ದು, ವರ್ಷದ 12 ತಿಂಗಳುಗಳಲ್ಲಿ ಕೃಷಿಯೊಂದಿಗೆ ಕಲೆಯಲ್ಲಿ ಬದುಕು ಸಾಗಿಸುತ್ತಿರುವುದು ವಿಶೇಷವಾಗಿದೆ. ಹಿರಿಯರಿಗೆ ಗೌರವ ಸಲ್ಲಿಸುವ ಕಲೆಯನ್ನು ಕೊಡಗಿನಲ್ಲಿ ಕಾಣಬಹುದು. ಯೋಧರು ಗಡಿಯನ್ನು ರಕ್ಷಿಸಿದರೆ ಕೊಡಗಿನ ಮಹಿಳೆಯರು ಭೂಮಿ ತಾಯಿಯನ್ನು ರಕ್ಷಿಸುವ ಮುಖಾಂತರ ಕೊಡಗಿನ ಸೌಂದರ್ಯವನ್ನು ಹೆಚ್ಚಿಸಿದ್ದಾರೆ ಎಂದರು. ಕೂಡಿಗೆಯ ಜಿ.ಎಸ್. ತೀರ್ಥೆಶ್‍ಕುಮಾರ್ ಮಾತನಾಡಿ, ‘ಕೊಡಗಿನ ಕೃಷಿಕ ಭೌಗೋಳಿಕವಾಗಿ ಎದುರಿಸುತ್ತಿರುವ ಸಮಸ್ಯೆ, ಅದಕ್ಕೆ ಕಾರಣ ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ಮಾತನಾಡಿ, ಕೊಡಗಿನ ಮೂಲ ನೆಲ, ಜಲ, ಸಂಸ್ಕøತಿಯನ್ನು ಕಾಪಾಡುವುದು ಪ್ರಮುಖ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ವಹಿಸಿದ್ದರು.