ನಾಪೆÉÇೀಕ್ಲು, ಅ. 19: ಸ್ಥಳೀಯ ಸಂತ ಮೇರಿ ಮಾತೆಯ ದೇವಾಲಯದಲ್ಲಿ ರೂ. 1.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಉದ್ಘಾಟಿಸಿದರು. ಈ ಸಂದರ್ಭ ಸಂತ ಮೇರಿ ಮಾತೆಯ ದೇವಾಲಯದ ವತಿಯಿಂದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಸಾಬ ತಿಮ್ಮಯ್ಯ ಮತ್ತು ಸದಸ್ಯರಾದ ಮಹಮ್ಮದ್ ಖುರೇಶಿ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಜ್ಞಾನ ಪ್ರಕಾಶ್, ಸಂತ ಮೇರಿ ಮಾತೆಯ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಇದ್ದರು.