ಕೂಡಿಗೆ, ಅ. 18: ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಲು ಹೋದ ವ್ಯಕ್ತಿಗೆ ಅದೇ ಜಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಹಣವನ್ನು ತೆಗೆದುಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಬೇರೆ ಎಟಿಎಂನಿಂದ ಸಾವಿರಾರು ರೂ.ಗಳನ್ನು ಲಪಟಾಯಿಸಿದ ಘಟನೆ ಕುಶಾಲನಗರದ ಎಟಿಎಂ ಕೇಂದ್ರವೊಂದರಲ್ಲಿ ನಡೆದಿದೆ.

ಕೂಡಿಗೆಯ ವ್ಯಕ್ತಿಯೊಬ್ಬ ತನ್ನ ಹಣವನ್ನು ತೆಗೆದುಕೊಳ್ಳಲು ಕುಶಾಲನಗರದ ಕೆನರಾ ಬ್ಯಾಂಕ್ ಹತ್ತಿರ ಇರುವ ಎಟಿಎಂ ಕೇಂದ್ರಕ್ಕೆ ಹೋಗಿ ಹಣವನ್ನು ಡ್ರಾ ಮಾಡಲು ಮುಂದಾದಾಗ ಕೆಲ ನಿಮಿಷಗಳ ಕಾಲ ಎಟಿಎಂನಿಂದ ಹಣ ಬರಲಿಲ್ಲ. ಈ ವೇಳೆ ವ್ಯಕ್ತಿಯೊಬ್ಬ ಹಣವನ್ನು ತೆಗೆದುಕೊಡುವ ನಾಟಕವಾಡಿ ಕೂಡಿಗೆ ವ್ಯಕ್ತಿಯ ಎಟಿಎಂ ಕಾರ್ಡನ್ನು ಹಾಕಿ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಪಿನ್ ನಂಬರ್ ತಿಳಿದುಕೊಂಡು ಎಟಿಎಂ ಕಾರ್ಡನ್ನು ಬದಲಾಯಿಸಿಕೊಂಡು ತೆರಳಿದ್ದು, ಕೆಲವೇ ನಿಮಿಷಗಳಲ್ಲಿ ಕುಶಾಲನಗರದ ಕೆನರಾ ಬ್ಯಾಂಕ್ ಸಮೀಪದ ಸಿಟಿ ಪ್ಯಾರ್ಟ್ ಕೇಂದ್ರದಲ್ಲಿರುವ ಎಟಿಎಂ ಕೇಂದ್ರದಿಂದ ರೂ. 20,500 ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೂಡಿಗೆ ವ್ಯಕ್ತಿಯ ಮೊಬೈಲ್‍ಗೆ ಸಂದೇಶ ಬಂದಿದ್ದು, ಕುಶಾಲನಗರ ಪೆÇಲೀಸ್ ಠಾಣೆಗೆ ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದಾರೆ.

-ಕೆಕೆಎನ್