ನಾಪೆÉÇೀಕ್ಲು, ಅ. 17: ಕೊಡಗಿನ ಕುಲದೇವಿ ಕಾವೇರಿ ಮಾತೆಯನ್ನು ಶತಮಾನಗಳಿಂದ ಆರಾಧಿಸುತ್ತಾ ಬಂದಿರುವ ಕೊಡಗಿನ ಮೂಲ ನಿವಾಸಿಗಳಿಗೆ ಮತ್ತು ನೈಜ ಭಕ್ತರಿಗೆ ತೀರ್ಥೋದ್ಭವ ಸಂದರ್ಭ ಅವಕಾಶವನ್ನು ನೀಡದ ಕ್ರಮ ಸರಿಯಲ್ಲ ಇದರಿಂದ ಕೊಡಗಿನ ಜನರು ಆರಾಧಿಸುತ್ತಾ ಬಂದಿರುವ ಕಾವೇರಿ ಮಾತೆಗೆ ಅವಮಾನ ಮಾಡಿದಂತೆ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಕಾವೇರಿ ಮಾತೆಯನ್ನು ಪೂಜಿಸುವವರು ಕೊಡಗಿನ ಜನರೇ ಹೊರತು ಜನಪ್ರತಿನಿಧಿಗಳಲ್ಲ ಎಂದಿದ್ದಾರೆ.
ತಲಕಾವೇರಿ ದೇವಾಲಯದ ಸಮಿತಿಯ ಅಧ್ಯಕ್ಷ ಶತಮಾನಗಳಿಂದ ಬಂದಿರುವ ಪದ್ಧತಿ ಸಂಪ್ರ್ರದಾಯವನ್ನು ಮರೆತು ಕೊಡಗಿನ ಕುಪ್ಯಚಾಲೆ ಧರಿಸದೆ. ತೀರ್ಥೊದ್ಭವ ಸಂದರ್ಭ ಕುಂಡಿಕೆಯ ಬಳಿಯಲ್ಲಿ ಪಂಚೆಯಲ್ಲಿ ಕಾಣಿಸಿ ತೀರ್ಥ ಬರುವ ಸಂದರ್ಭ ಅಲ್ಲಿಂದ ಪಲಾಯಾನವಾಗಿರುವುದು ಏಕೇ ಎಂದು ಪ್ರಶ್ನಿಸಿದ ಅವರು ಕಾವೇರಿ ದೇವಾಲಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಮುಂದೆ ಕಾವೇರಿ ಮಾತೆ ಆರಾಧಕ ಕುಟುಂಬದವರಾದ ಮಣವಟ್ಟಿರ, ಮಂಡೀರ, ಮತ್ತು ಪಟ್ಟಮಾಡ ಕುಟುಂಬದವರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕಾವೇರಿ ಮಾತೆಯ ತೀರ್ಥವನ್ನು ಕಳೆದ 25 ವರ್ಷಗಳಿದ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಸಂಘ ಸಂಸ್ಥೆಗಳು ಮಾಡುತ್ತಾ ಬಂದಿದ್ದು ಅದನ್ನು ಅಧ್ಯಕ್ಷರು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಮಾಜಿ ಅಧ್ಯಕ್ಷೆ ಕಲಿಯಾಟಂಡ ಸುಮಿತ್ರಾ ದೇವಯ್ಯ, ಮಡಿಕೇರಿ ತಾಲೂಕು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಚೋಕಿರ ಸುಧಿ ಅಪ್ಪಯ್ಯ, ಬಿದ್ದಾಟಂಡ ಮಮತಾ ಚಿಣ್ಣಪ್ಪ ಉಪಸ್ಥಿತರಿದ್ದರು.