ಕಣಿವೆ, ಅ. 13: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ ಮೂರುವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಪಿಡಿಒ ಎಂ.ಎಸ್. ರಾಜಶೇಖರ್ ಅವರನ್ನು ಪಂಚಾಯಿತಿ ಸಿಬ್ಬಂದಿಗಳು ಬೀಳ್ಕೊಟ್ಟರು. ಇದೀಗ ಇವರು ಕೆದಕಲ್ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಸುಮೇಶ್ ಎಂಬವರು ಅಧಿಕಾರ ವಹಿಸಿಕೊಂಡಿದ್ದಾರೆ.