ಸುಂಟಿಕೊಪ್ಪ, ಅ. 17: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ 50ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಸರಳವಾಗಿ ತಾ. 25 ರಂದು ಆಚರಿಸಲು ನಿರ್ಧರಿಸಲಾಗಿದೆ.

ಈ ಹಿಂದೆ ನೃತ್ಯ ಸ್ಪರ್ಧೆ, ವಾಹನ ಅಲಂಕಾರ ಸ್ಪರ್ಧೆ, ಅಂಗಡಿ ಹಾಗೂ ಸರ್ಕಾರಿ ಕಚೇರಿ ಅಲಂಕಾರ ಸ್ಪರ್ಧೆ ಇತ್ಯಾದಿಗಳಿಂದ ಕೂಡಿ ವಿಜೃಂಭಣೆಯಿಂದ ಆಚರಿಸಲಾ ಗುತ್ತಿತ್ತು. ಆದರೆ ಕೊರೊನಾ ಮಹಾಮಾರಿಯಿಂದ ಸರಳವಾಗಿ ವಾಹನಗಳ ಪೂಜಾ ಕೈಂಕರ್ಯಕ್ಕೆ ಸೀಮಿತಗೊಳಿಸಲಾಗಿದೆ.