ಶ್ರೀಮಂಗಲ, ಅ. 17: ವೀರಾಜ ಪೇಟೆ ತಾಲೂಕು ಪಂಚಾಯಿತಿಗೆ ನೂತನವಾಗಿ ನೇಮಕವಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಸಿ. ಅಪ್ಪಣ್ಣ ಅವರನ್ನು ಪೆÇನ್ನಂಪೇಟೆ ಕೊಡವ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್‍ನ ಅಧ್ಯಕ್ಷ ಮಲ್ಚೀರ ನಿಶಾನ್ ಉತ್ತಪ್ಪ, ಉಪಾಧ್ಯಕ್ಷ ಅಡ್ಡಂಡ ಸುನೀಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಗಾಂಡಗಡ ಕೌಶಿಕ್ ದೇವಯ್ಯ, ಖಜಾಂಚಿ ಕೊಟೇರ ಕಿಶನ್ ಉತ್ತಪ್ಪ ಹಾಗೂ ನಿರ್ದೇಶಕರು ಹಾಜರಿದ್ದರು.