ಶ್ರೀಮಂಗಲ, ಅ. 17: ಶ್ರೀಮಂಗಲ ನಾಡು ಕೊಡವ ಸಮಾಜ ಪೆÇಮ್ಮಕ್ಕಡ ಪರಿಷತ್‍ನಿಂದ ಶ್ರೀಮಂಗಲ ಬಸ್ ನಿಲ್ದಾಣದಿಂದ ಕೊಡವ ಸಮಾಜದವರೆಗೆ ಸ್ವಚ್ಛತಾ ಓಟ ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಶ್ರೀಮಂಗಲ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವ ನಾಮಫಲಕವನ್ನು ಪೆÇಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆ ಕಟ್ಟೇರ ಸುಶೀಲ ಅಚ್ಚಪ್ಪ ಮತ್ತು ಹಿರಿಯರಾದ ಬಾದುಮಂಡ ಉತ್ತಯ್ಯ ಉದ್ಘಾಟಿಸಿದರು. ಸ್ವಚ್ಛತೆ ಬಗ್ಗೆ ಜನರಲ್ಲಿ ನಿರಂತರ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೊಡವ ಸಮಾಜ ಅಧ್ಯಕ್ಷ ಚೋನಿರ ರತನ್, ಕಾರ್ಯದರ್ಶಿ ಮಚ್ಚಾಮಾಡ ವಿಜಯ್ ಹೇಳಿದರು.

ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಸಮಾಜದ ಪದಾಧಿಕಾರಿಗಳು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಪೆÇಮ್ಮಕ್ಕಡ ಪರಿಷತ್ ಕಾರ್ಯದರ್ಶಿ ಡಾ. ಕಟ್ಟೆರ ಸಂಧ್ಯಾ ಪೂಣಚ್ಚ, ಪ್ರಮುಖರಾದ ಮಚ್ಚಾಮಾಡ ಕಾರ್ಯಪ್ಪ, ನಂದಿತಾ ಕಾರ್ಯಪ್ಪ, ಅಜ್ಜಮಾಡ ಶರ್ಲಿ ಬೋಪಣ್ಣ, ಕಾಳಿಮಾಡ ಸೀಮಾ, ಚಂಚಲ್, ಮಚ್ಚಾಮಾಡ ರೇಷ್ಮಾ, ಚೋನಿರ ಪ್ರವೀಣ್, ಚಂಗುಲಂಡ ಲಿಖಿತ್, ಕೋಳೆರ ಗ್ರೇಸಿ, ಮದ್ರೀರ ಫೆಮಿನಾ ಮತ್ತಿತತರು ಹಾಜರಿದ್ದರು. ಪಟ್ಟಣದ ಮೂರು ಕಡೆಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಫಲಕವನ್ನು ಅಳವಡಿಸಲಾಯಿತು.